ಹುಡುಗನೆಂದರೆ ಬಾಲಕ
ಹುಡುಗನಿಗೆ ಹುಡುಗಿ ನೋಡುವ ತವಕ
ತಂದೆಯಂದರೆ ಜನಕ
ಸೀತಾಮಾತೆ ತಂದೆ ಜನಕ
ದಿನಾಲು ಮಾಡಬೇಕು ಜಳಕ
ಆಗುವುದು ಮನಸ್ಸಿಗೆ ಪುಳಕ
ಇಲ್ಲದಿದ್ದರೆ ನೀವಾಗುವಿರಿ ಕೊಳಕ
ಹಣೆಗೆ ಇಡಬೇಕು ತಿಲಕ
ಬಾಗಿಲಿಗೆ ಬೇಕು ಚಿಲಕ
ಬೇಸಿಗೆಯಲ್ಲಿ ಕುಡಿಬೇಕು ಪಾನಕ
ಕ್ರಿಕೆಟ್ನಲ್ಲಿ ಬಾರಿಸ್ತಾರೆ ಶತಕ
ಯಾವತ್ತೂ ಕೇಳಬಾರದು ಜಾತಕ
ಹೋಳಿಗೆ ಮಾಡಲು ಬೇಕು ಕಣಕ
ಬೆಂಕಿಯಿಂದ ಬರುವುದು ಶಾಖ
ಚಳಿಗೆ ಆಗುವುದು ಮೈ ನಡುಕ
ಉಂಡಿ ಮಾಡಲು ಬೇಕು ಪಾಕ
ಬದುಕು ಒಂದು ನಾಟಕ
ಪ್ರಯಾಣ ಮಾಡಲು ಬೇಕು ಜಟಕ
ವಾಹನ ಓಡಿಸಲು ಬೇಕು ಚಾಲಕ
ದುಡಿಯುವವನೆ ಕಾರ್ಮಿಕ
ಕುಡಿಯುವವನೆ ಕುಡುಕ
ಏನಾದರೂ ಸಾಧಿಸಿದರೆ ಜೀವನ ಸಾರ್ಥಕ
ಗಣೇಶನ ಹೆಸರು ಬೆನಕ
ಕಪ್ಪೆಗೆ ಇನ್ನೊಂದು ಹೆಸರು ಮಂಡೂಕ
ಇಲಿ ಹೋಗುವುದು ಬಿಲಕ
ಇಲಿಗೆ ಅಂತಾರೆ ಮೂಷಿಕ
ಗಾಳಿಯಲ್ಲಿ ಹೆಚ್ಚಾಗಿದೆ ಸಾರಜನಕ
ನೀರಲ್ಲಿ ಹೆಚ್ಚಾಗಿದೆ ಜಲಜನಕ
ಎಷ್ಟಿದ್ದರೇನು ಧನ ಕನಕ
ಗಿಡ ಮರ ಬೆಳೆಸಿದರೆ ಸಿಗುವುದು ಆಮ್ಲಜನಕ
Super sir
ReplyDeleteNice..sir
ReplyDeleteNice..sir
ReplyDeleteNice..sir
ReplyDeleteInnovative
ReplyDelete