girishkallihal.blogspot.com/ is a blog containing most important articles on national and state aspects and also Kannada poems. You will find resourceful blog contents which will help you to enrich your knowledge.

Tuesday 25 October 2016

ಮೊಬೈಲ್ ಫೋನ್ 📱 ಮಾರಕವೇ ಅಥವಾ ಪೂರಕವೇ?

ಪ್ರಿಯ ಓದುಗರಿಗೆ ಗಿರೀಶ ಕಳ್ಳಿಹಾಳ ಮಾಡುವ ನಮಸ್ಕಾರ.
       ಪ್ರಿಯ ಮಿತ್ರರೆ ಹಿಂದೆ ಹಿರಿಯರು ಹೇಳ್ತಾ ಇದ್ದಿದ್ದನ್ನ ನೆನಪು ಮಾಡಿಕೋಳ್ತಾ ಇದ್ದೆ, ಅದೆ ಗಾದೆ ಮಾತು. ನೀವು ಕೇಳಿರಬಹುದು ಸಾವಿಲ್ಲದ ಮನೆಯಿಂದ ಸಾಸಿವೆ ತಾ ಅಂತ ಅದೇ ರೀತಿ ಈಗಿನ ಕಾಲದಲ್ಲಿ ಹೇಳುವುದಾದರೆ ಮೊಬೈಲ್ ಫೋನ್ 📱 ಇಲ್ಲದ ಮನೆಯಿಂದ ಮದುವೆ 💒 ಮಾಡಿಕೊಂಡು ಬಾ ಅಂತ ಹೇಳಿದರೆ ತಪ್ಪಾಗಲಾರದು ಹೌದಲ್ಲವೇ? ಹೌದು ಏಕೆಂದರೆ ಮೊಬೈಲ್ ಫೋನ್ 📱 ಇಲ್ಲದ ಮನೆಯೇ ನಿಮಗೆ ಸಿಗಲಾರದ ಸ್ಥಿತಿ ನಿರ್ಮಾಣವಾಗಿದೆ.
       ಈ ಮೇಲಿನ ಹೇಳಿಕೆ ಗಮನಿಸಿದರೆ ಸಾಕು ನನ್ನ ಮನದಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ, ಬಹುಶಃ ನಿಮ್ಮ ಮನದಲ್ಲಿಯೂ ಕೂಡ ನನ್ನ ತರಹದ ಒಂದೆರಡು ಪ್ರಶ್ನೆಗಳು ಮಾಡಿರಬಹುದು.
     ನನ್ನ ಮನದಲ್ಲಿ ಮೂಡಿದ ಅನೇಕ ಪ್ರಶ್ನೆಗಳಲ್ಲಿ ಬಹು ಮುಖ್ಯ ಪ್ರಶ್ನೆ "ಮೊಬೈಲ್ ಫೋನ್ 📱 ಮಾರಕವೇ ಅಥವಾ ಪೂರಕವೇ" ಎಂದು.
       ಈ ಮೇಲಿನ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ, ಕೆಲವರು ಮೊಬೈಲ್ ಫೋನ್ ಪೂರಕವಾಗಿದೆ ಎಂದು ಹೇಳಿದರೆ ಮತ್ತೆ ಕೆಲವರು ಮಾರಕವಾಗಿದೆ ಎನ್ನುತ್ತಾರೆ.
      ನನ್ನ ಪ್ರಕಾರ ಈ ಪ್ರಶ್ನೆಗೆ ಉತ್ತರ ನೀಡುವುದಾದರೆ ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು.

1. ಮೊದಲು ಮೊಬೈಲ್ ಫೋನ್ ಪೂರಕ ಎಂದು ಹೇಳುವುದಾದರೆ

☺ ಮೊಬೈಲ್ ಫೋನ್ ಅನ್ನು ಬಳಸಿಕೊಂಡು ಜನರು 👥 ಒಬ್ಬರನ್ನೊಬ್ಬರು ಸಂಪರ್ಕಿಸಬಹುದು.

☺ ಶೀಘ್ರವಾಗಿ ಸಂಪರ್ಕಿಸಲು ಮಾಧ್ಯಮ.

☺ ನಿಮ್ಮ ಬಳಿ ಯಂತ್ರ ಮಾನವ (Android) ಮೊಬೈಲ್ ಫೋನ್ 📱 ಇದ್ದರೆ, ಫೋಟೋ 📷 ಕಳುಹಿಸಲು, ವಿಡಿಯೋ ಕಳುಹಿಸಲು, ಧ್ವನಿ 🔊 ಕಳುಹಿಸಲೂ ಕೂಡ ಸಾಧ್ಯ.
ಅಷ್ಟೇ ಅಲ್ಲದೆ ಇನ್ನೂ ಹಲವಾರು ರೀತಿಯಲ್ಲಿ ನಿಮಗೆ ಹಲವಾರು ಬಗೆಯ ಆಯ್ಕೆಗಳು ದೊರೆಯುತ್ತವೆ.

☺ ಮೊಬೈಲ್ ಫೋನ್ ಕೇವಲ ಸಂಪರ್ಕ ಕಲ್ಪಿಸುವ ಮಾಧ್ಯಮವಾಗಿ ಉಳಿದಿಲ್ಲ, ಅದು ನಿಮ್ಮನ್ನು ಒಂಟಿಯಾಗಿ ಇರಲು ಬಿಡುವುದಿಲ್ಲ.

☺ ಮೊಬೈಲ್ ಫೋನ್ ಈ ಒಂದು ವಸ್ತು ಬಂದಮೇಲೆ ಹಲವಾರು ವಸ್ತುಗಳು ಮಾಡುತ್ತಿದ್ದ ಕೆಲಸವನ್ನು ಕೇವಲ ಈ ಒಂದು ವಸ್ತುವಿನಲ್ಲಿ ಇಂದು ನೀವು ನಾವೆಲ್ಲ ಮಾಡುತ್ತಿದ್ದೇವೆ.
ಉದಾಹರಣೆಗೆ :
ಕ್ಯಾಮೆರಾ 🎥  ಮಾಡುವ ಕೆಲಸ.
ಟೇಪ್ ರೆಕಾರ್ಡ್ ಮಾಡ್ತಾ ಇದ್ದ ಕೆಲಸ.
ರೇಡಿಯೋ 📻 ಮಾಡುವ ಕೆಲಸ.
ಕೈ ಗಡಿಯಾರ 🕒 ಮಾಡ್ತಾ ಇದ್ದ ಕೆಲಸ.
ಅಲಾರಂ ಕೆಲಸ.
ಕಾಗದ ಪತ್ರ ✉ ಕೆಲಸ.
ದೀವಟಿಗೆ (Torch 🔦) ಕೆಲಸ.
ಇತ್ಯಾದಿ.

☺ ಅಷ್ಟೇ ಅಲ್ಲದೇ ಮೊಬೈಲ್ ಫೋನ್ ನಿಮ್ಮ ಜೊತೆ ಆಟ ಆಡಬಲ್ಲದು.
ಇನ್ನೂ ಹಲವಾರು ರೀತಿಯಲ್ಲಿ ನಿಮಗೆ ಫೋನ್ ಪೂರಕವಾಗಿ ಕಾಣುತ್ತದೆ.

ಆದರೆ

ನನಗೆ ತುಂಬಾ ನೋವುಂಟು ಮಾಡಿದ ಸಂಗತಿಯೆಂದರೆ ಮೊಬೈಲ್ ಫೋನ್ ಪೂರಕವಾಗಿದೆ ಎಂದು ಹೇಳಲು ಸಿಗುವ ಕಾರಣಗಳಿಗಿಂತ ಅದು ಮಾರಕವಾಗಿದೆ ಎಂದು ಹೇಳಲು ಸಿಗುವ ಕಾರಣಗಳೇ ಹೆಚ್ಚು ಎಂಬುದು.

2. ಮೊಬೈಲ್ ಫೋನ್ ಮಾರಕವಾಗಿದೆ ಎಂದು ಹೇಳುವುದಾದರೆ
😢 ಇಂದು ಮೊಬೈಲ್ ಫೋನ್ 📱 ಬಳಸುವುದು ಒಂದು ರೀತಿಯಲ್ಲಿ ರೋಗ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಏಕೆಂದರೆ ಒಬ್ಬ ವ್ಯಕ್ತಿ 👨 ಇಂದು ಒಂದು ಕ್ಷಣ ಕೊಡ ಮೊಬೈಲ್ ಫೋನ್ ಬಿಟ್ಟು ಇರಲಾರದ ಸ್ಥಿತಿಯಲ್ಲಿ ಇದ್ದಾನೆ.
😢 ಉದಾಹರಣೆಗೆ ಹೇಳುವುದಾದರೆ ಯಾವುದೇ ಒಬ್ಬ ದುಷ್ಚಟ ಇರುವ ವ್ಯಕ್ತಿಯನ್ನು ಇಂದು ನಾವು ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಬದಲಾಯಿಸಬಹುದು ಆದರೆ ಮೊಬೈಲ್ ಫೋನ್ ಎಂಬ ಮಾಯಾಜಾಲದಲ್ಲಿ ಬಿದ್ದವರನ್ನ ಗುಣಪಡಿಸುವದು ಕಷ್ಟ ಸಾಧ್ಯ.
😢 ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ಮೊಬೈಲ್ ಫೋನ್ ಒಂದು ರೀತಿಯಲ್ಲಿ ಈಗಿನ ಯುವಜನತೆಯನ್ನು ಹಾದಿ ತಪ್ಪಿಸುವ ರೀತಿಯಲ್ಲಿ ಬಳಕೆ ಆಗುತ್ತಿದೆ ಎಂದು ಅನಿಸುತ್ತದೆ. ಕೆಲವರು ಹೇಳಬಹುದು ನಾವು ಬಳಸುವ ರೀತಿಯ ಮೇಲೆ ಅದರ ಪರಿಣಾಮ ಬೀರಲಿದೆ ಅಂತ ಹೌದು ನಿಜ, ಆದರೆ ನೆನಪಿರಲಿ ನಾವು ಹರಿತವಾದ ಚಾಕುವಿನಿಂದ ತರಕಾರಿಗಳನ್ನು ಕತ್ತರಿಸಬೇಕು, ಹಣ್ಣುಗಳನ್ನು ಕತ್ತರಿಸಬೇಕು ಹೊರತು ಬೇರೆಯವರ ಕತ್ತನ್ನಾಗಲೀ ಅಥವಾ ಸ್ವತಃ ನಮ್ಮ ಕತ್ತನ್ನಾಗಲೀ ಕತ್ತರಿಸಲು ಬಳಸುವುದು ಮುರ್ಖತನದ ಪರಮಾವಧಿಯೆ ಹೊರತು ಬೇರೇನೂ ಅಲ್ಲ. ನೀವು ಸಭೆ ಸಮಾರಂಭಗಳಲ್ಲಿ ನೋಡಿರಬಹುದು ಹಿಂದೆ ಹಿರಿಯರು ತಮ್ಮ ಸುತ್ತಲಿನ ಜನರ ಜೊತೆ ಬೆರೆತು ತಮ್ಮ ಸುಖ ದುಃಖ ಹಂಚಿಕೋಳ್ತಾ ಇದ್ದಿದ್ದನ್ನ. ಆದರೆ ಇಂದು ನಾವು ನೀವೆಲ್ಲ ನೀಡಿರುವ ಹಾಗೆ ಯಾರೂ ಹಿಂದೆ ಹಿರಿಯರು ಸಮಾರಂಭದಲ್ಲಿ ಮಾತನಾಡುತ್ತಾ ಇದ್ದಷ್ಟು ಈಗ ಯಾರೂ ಮಾತನಾಡುತ್ತಾ ಇಲ್ಲ ಇದಕ್ಕೆ ಕಾರಣ ಮೊಬೈಲ್ ಫೋನ್ 📱. ಇಂದಿನ ದಿನಗಳಲ್ಲಿ ಯಾರಾದರೂ ಜಗಳಕ್ಕೆ ನಿಂತರೆ ಯಾರೊಬ್ಬರೂ ಜಗಳ ಬಿಡಿಸಲು ಬರುವುದಿಲ್ಲ ಬದಲಾಗಿ ತಮ್ಮಲ್ಲಿರುವ ಮೊಬೈಲ್ ಫೋನ್ನಿಂದ ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗುತ್ತಾರೆ. ಅಂದರೆ ಮೊಬೈಲ್ ಫೋನ್ 📱 ಈ ಒಂದು ವಸ್ತುವಿನಿಂದ ಇಂದು ಮಾನವೀಯ ಮೌಲ್ಯಗಳನ್ನು ಜನ ಕಳೆದುಕೊಳ್ಳುತ್ತಿರುವ ಸಂಗತಿ ವಿಷಾದನೀಯ. ಇನ್ನೊಂದು ವಿಷಾದನೀಯ ಸಂಗತಿ ಎಂದರೆ ಮೊಬೈಲ್ ಫೋನ್ 📱 ಕೇವಲ ಮಾನವೀಯ ಮೌಲ್ಯಗಳನ್ನು ಅಷ್ಟೇ ಅಲ್ಲ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
      😢 ಈ ಮೊಬೈಲ್ ಫೋನ್ 📱 ಎಂಬ ವಸ್ತು ಬರುವುದಕ್ಕೆ ಮೊದಲು ಜನ ಸರಿಯಾಗಿ ಕೆಲಸ ಮಾಡುತ್ತಿದ್ದರು ಹಾಗೆಯೇ ನೆಮ್ಮದಿಯಿಂದ ಬದುಕುತ್ತಿದ್ದರು, ಅಂದರೆ ಮೊಬೈಲ್ ಫೋನ್ ಮನುಷ್ಯನ ನೆಮ್ಮದಿಯನ್ನು ಕೂಡ ಕಸಿದುಕೊಂಡಿದೆ ಅಂದರೆ ತಪ್ಪಾಗಲಾರದು. ಏಕೆಂದರೆ ಮೊಬೈಲ್ ಫೋನ್ ಬಂದಾಗಿನಿಂದ ಅದರಲ್ಲೂ ಈಗಿನ ಸ್ಮಾರ್ಟ್ ಫೋನ್ಗಳ ಹಾವಳಿಯಿಂದ ಜನ ಸರಿಯಾಗಿ ನಿದ್ರೆ ಮಾಡುತ್ತಿಲ್ಲ. ಮನುಷ್ಯ ಸರಿಯಾಗಿ ನಿದ್ರೆ ಮಾಡದೇ ಇರುವುದರಿಂದ ಅನೇಕ ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾನೆ.
ಅದರಲ್ಲೂ ವಿಶೇಷವಾಗಿ ಈಗಿನ ಯುವಜನತೆ ತಮ್ಮ ಮೊಬೈಲ್ ಫೋನ್ ನಲ್ಲಿ ಅಂತರ್ಜಾಲ ಸಂಪರ್ಕ ಹೊಂದಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿರುವ ಸಂಗತಿ ವಿಷಾದನೀಯ, ಏಕೆಂದರೆ ಮೊದಲು ಮೂಲಭೂತ ಸೌಕರ್ಯ ಅಂದರೆ ಎ, ಡಬ್ಲ್ಯು, ಎಫ್. (AWF) ಎಂದು ಹೇಳುತ್ತಿದ್ದ ಮಾತು ನೆನಪಾಯಿತು, ಅಂದ ಹಾಗೆ ಎ, ಡಬ್ಲ್ಯು, ಎಫ್ (AWF)

Social Media on Mobile Phone
ಅಂದರೆ ಬೇರೇನೂ ಅಲ್ಲ ಅದೆ
ಎ = ಏರ್ (A=Air) 
ಡಬ್ಲ್ಯು = ವಾಟರ್ (W=Water) 
ಎಫ್ = ಫುಡ್ (F=Food 🍲)
ಇದೆ ಮಾತನ್ನು ಈಗಿನ ಯುವಜನತೆಗೆ ಅನ್ವಯ ಆಗುವಂತೆ ಹೇಳುವುದಾದರೆ  ಮೂಲಭೂತ ಸೌಕರ್ಯಗಳ ಸಂಕ್ಷಿಪ್ತ ರೂಪ ಎ. ಡಬ್ಲ್ಯು. ಎಫ್. (AWF) ಅನ್ನು ಈ ತರಹದ ರೀತಿಯಲ್ಲಿ ಹೇಳಬಹುದು
ಹೇಗೆಂದರೆ
ಎ = ಆಂಡ್ರಾಯಿಡ್ (A=Android) 
ಡಬ್ಲ್ಯು = ವಾಟ್ಸ್ಯಾಪ್ (W=WhatsApp) 
ಎಫ್ = ಫೇಸ್ಬುಕ್ (Facebook)
ಇವುಗಳನ್ನು ಜನ ಮೂಲಭೂತ ಸೌಕರ್ಯಗಳ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಈ ಲೇಖನ ಓದಿದ ನಂತರ ನಿಮ್ಮ ಮನದಲ್ಲಿ ಮೊಬೈಲ್ ಫೋನ್ 📱 ಬಳಸುವುದು ತಪ್ಪೇ❓ ಎಂಬ ಪ್ರಶ್ನೆ ಮೂಡಬಹುದು ಆದರೆ ನೆನಪಿರಲಿ ನಾನು ಈ ಲೇಖನದಲ್ಲಿ ಹೇಳುತ್ತಿರುವುದು ಮೊಬೈಲ್ ಫೋನ್ 📱 ಬಳಸಬೇಡಿ ಅಂತ ಅಲ್ಲ, ಬಳಸಿ ಆದರೆ ಮಿತವಾಗಿ ಬಳಸಿ ಏಕೆಂದರೆ ಅತೀ ಆದರೆ ಅಮೃತವೂ ವಿಷ.
ಕೊನೆಯಲ್ಲಿ ಈ ಲೇಖನದ ಮೂಲಕ ನಾನು ಹೇಳುವುದು ಏನೆಂದರೆ
“ಮೊಬೈಲ್ ಫೋನ್ 📱 ಬಳಸಿ ಮಿತವಾಗಿ, ಜೀವನ ಸಾಗಿಸಿ ಹಿತವಾಗಿ”.

2 comments:

  1. We can compare mobile phone to a drug..
    We should use it when it is necessary but within a limit

    ReplyDelete
  2. super sir..a beutifull message..

    ReplyDelete