girishkallihal.blogspot.com/ is a blog containing most important articles on national and state aspects and also Kannada poems. You will find resourceful blog contents which will help you to enrich your knowledge.

Saturday 12 November 2016

ನರೇಂದ್ರ ಮೋದಿಯವರ ಮಹತ್ವದ ನಿರ್ಧಾರ

ಪ್ರಿಯ ಓದುಗರಿಗೆ ಗಿರೀಶ ಕಳ್ಳಿಹಾಳ ಮಾಡುವ ನಮಸ್ಕಾರ 🙏.
ಪ್ರಿಯ ಮಿತ್ರರೆ ದಿನಾಂಕ 8-11-2016 ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದು ಇರಬೇಕಾದ ಒಂದು ಮಹತ್ವದ ದಿನ, ಏಕೆಂದರೆ ಈ ಮೇಲಿನ ದಿನದಿಂದ ನಮ್ಮ ಅಖಂಡ ಭಾರತದಲ್ಲಿ ಈ ಮೊದಲು ಚಲಾವಣೆ ಮಾಡುತ್ತಿದ್ದ ರೂ. 500 ಹಾಗೂ ರೂ. 1000 ಮುಖಬೆಲೆಯ ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ನಿಷೇಧಿಸಲಾಗಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಈ ಮೂಲಕ ತಮ್ಮ ಮತ್ತೊಂದು ಮಹತ್ವದ ಹೆಜ್ಜೆಯನ್ನ ಕಪ್ಪುಹಣ ವಾಪಸ್ ತರಬೇಕು ಎಂಬ ನಿಟ್ಟಿನಲ್ಲಿ ಇಟ್ಟಿರುವುದು ವಿಶೇಷ.
ಇದರಿಂದ ಭ್ರಷ್ಟಾಚಾರದಲ್ಲಿ ತೊಡಗಿರುವ ಜನರಿಗೆ ನಡುಕ ಉಂಟಾಗಿದೆ ಎಂಬುದಂತೂ ಸತ್ಯ.
ಆದರೆ ಸಾಮಾನ್ಯ ಜನರಿಗೆ ಯಾವುದೇ ಆತಂಕ 😱 ಬೇಡ ಏಕೆಂದರೆ ನಿಮ್ಮಲ್ಲಿರುವ ರೂ. 500 ಹಾಗೂ ರೂ. 1000 ಮುಖಬೆಲೆಯ ಹಳೆಯ ನೋಟುಗಳನ್ನು ತಾವು ಬ್ಯಾಂಕಿನಲ್ಲಿ ನಿಮ್ಮ ಖಾತೆಗೆ ನೇರವಾಗಿ  ಜಮಾ ಮಾಡಬಹುದು ಎಂಬುದನ್ನು ಮೋದಿಯವರು ಘೋಷಿಸಿದ್ದಾರೆ ಆದರೆ ಹಾಗೆ ಹಣವನ್ನು ಜಮಾ ಮಾಡುವಾಗ ನಾವು - ನೀವು ಅಂದರೆ ಜನಸಾಮಾನ್ಯರು ಮಾಡಬೇಕಾದ ಕೆಲಸವೆಂದರೆ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ನೀಡಿ ಹಣ ಜಮಾ ಮಾಡಬಹುದು.
ಒಂದು ವೇಳೆ ನಿಮ್ಮಲ್ಲಿ ಅಪಾರ ಪ್ರಮಾಣದ ಹಣ ಇದ್ದರೂ ಆತಂಕ ಪಡುವ ಅಗತ್ಯವಿಲ್ಲ ಏಕೆಂದರೆ ನಿಮ್ಮಲ್ಲಿರುವ ಆ ಅಪಾರ ಪ್ರಮಾಣದ ಹಣಕ್ಕೆ ಸಂಬಂಧಿಸಿದಂತೆ ಸರಿಯಾಗಿ ದಾಖಲೆ ಪತ್ರಗಳನ್ನು ನೀಡಿದರೆ ಯಾವುದೇ ರೀತಿಯ ತೊಂದರೆ ಇಲ್ಲದೆ ನಿಮ್ಮ  ಹಣವನ್ನು ನಿಮ್ಮ  ಖಾತೆಗೆ ಜಮಾ ಮಾಡಬಹುದು. ಈ ರೀತಿ ತಮ್ಮಲ್ಲಿರುವ ಹಳೆಯ ನೋಟುಗಳನ್ನು ತಾವು ಬ್ಯಾಂಕಿನಲ್ಲಿ  ತಮ್ಮ -ತಮ್ಮ  ಖಾತೆಗೆ ಜಮಾ ಮಾಡಿಕೊಳ್ಳಲು ಸರ್ಕಾರ ದಿನಾಂಕ 10-11-2016 ರಿಂದ – 30-12-2016 ರವರೆಗೆ ಕಾಲಾವಕಾಶ ನೀಡಿದೆ.
ಜನರಲ್ಲಿ ಕಾಡುತ್ತಿರುವ ಮತ್ತೊಂದು ಪ್ರಮುಖ ಪ್ರಶ್ನೆಯೆಂದರೆ “ಹಳೆಯ ನೋಟುಗಳನ್ನು ನಿಷೇಧಿಸಲಾಗಿದೆ ಹಾಗಾದರೆ ಮುಂದೇನು”? ಎಂಬುದು. ಅದಕ್ಕೂ ಆತಂಕ 😱  ಪಡುವ ಅಗತ್ಯವಿಲ್ಲ ಏಕೆಂದರೆ ಈಗಾಗಲೇ ಬ್ಯಾಂಕುಗಳು  ಹೊಸ ರೂ. 500 ಹಾಗೂ ರೂ. 2000 ಮುಖಬೆಲೆಯ ನೋಟುಗಳನ್ನು ಜನರಿಗೆ ನೀಡಲು ಸರ್ವ ರೀತಿಯಲ್ಲಿ ಸನ್ನಧ್ಧವಾಗಿವೆ. ಜನಸಾಮಾನ್ಯರಿಗೆ ಇನ್ನೊಂದು ವಿಷಯವನ್ನು ಹೇಳಬೇಕು ಅದು ಏನೆಂದರೆ ರೂ. 100,  ರೂ. 50, ರೂ. 20, ರೂ. 10, ರೂ.  5 ಹಾಗೂ ರೂ. 1 ಮುಖ ಬೆಲೆಯುಳ್ಳ ಹಳೆಯನೋಟುಗಳನ್ನು ದೈನಂದಿನ ವ್ಯವಹಾರಕ್ಕೆ ಉಪಯೋಗಿಸಲು ಯಾವುದೇ ತೊಂದರೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
          ರೈತಾಪಿ ಜನರು ಯಾವುದೇ ರೀತಿಯಲ್ಲಿ ನರೇಂದ್ರ ಮೋದಿ ಅವರ ನಿರ್ಧಾರದಿಂದ ಭಯ ಪಡುವ ಅಗತ್ಯವಿಲ್ಲ ಏಕೆಂದರೆ ಕೃಷಿಯಿಂದ ಬರುವ ಆದಾಯಕ್ಕೆ ತೆರಿಗೆ 🛃 ವಿನಾಯಿತಿ ಇದೆ ಎಂದು ಅವರು ಹೇಳಿದ್ದಾರೆ.
ರೈತಾಪಿ ಜನರು ತಮ್ಮ – ತಮ್ಮ ಖಾತೆಗೆ ಹಣ ಜಮಾ ಮಾಡಿಕೊಳ್ಳಲು ತಮ್ಮ ಹೊಲದ ಪಾಣಿಯ ಪ್ರತಿಯನ್ನು ಬ್ಯಾಂಕಿಗೆ ನೀಡಿ ನಿಮ್ಮ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಬಹುದು ಇದಕ್ಕೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ ಆದ್ದರಿಂದ ರೈತರು ಭಯ ಪಡುವ ಅಗತ್ಯವಿಲ್ಲ.
          ಈ ಸಂದರ್ಭದಲ್ಲಿ ನನಗೆ ಇನ್ನೊಂದು ಮಾತು ನೆನಪಾಯಿತು ಅದೆನೆಂದರೇ “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಹೇಳಿಕೆ. ಈ ಹೇಳಿಕೆಯಲ್ಲಿ ಧರ್ಮವು ರಕ್ಷಿಸುತ್ತದೆ ಎಂಬುದೇನೋ ಸರಿ. ಆದರೆ ಉಳಿದರ್ಧ ಭಾಗವನ್ನು ನಾವು ಅರ್ಥೈಸಬೇಕು. ಧರ್ಮದ ತಳಹದಿಯಲ್ಲಿ, ಧರ್ಮಮಾರ್ಗ ಹೇಳುವ ನೀತಿಸೂತ್ರಗಳನ್ನವಲಂಬಿಸಿ ಬದುಕುವ ಬದುಕನ್ನು ನಾವು ಆಯ್ದುಕೊಂಡರೆ ನಮಗೆ ರಕ್ಷಣೆ ಸಿಗುವುದು ಪ್ರಕೃತಿ ಸಹಜ ಎಂಬುದು ಇದರ ಅರ್ಥ. ಅಂದರೆ ಇವತ್ತು ಕಲಿಯುಗದಲ್ಲಿ ಯಾರು ದುಡ್ಡಿನ ವಿಷಯದಲ್ಲಿ ಧರ್ಮ ಮಾರ್ಗದಲ್ಲಿ ಸಂಚಾರ ಮಾಡಿದ್ದಾರೆ ಅವರಿಗೆ ಯಾವುದೇ ರೀತಿಯಲ್ಲಿ ನರೇಂದ್ರ ಮೋದಿ ಅವರ ನಿರ್ಧಾರದಿಂದ ತೊಂದರೆ ಉಂಟಾಗುವುದಿಲ್ಲ.
       ಈ ಸಂದರ್ಭದಲ್ಲಿ ನನಗೆ ಇನ್ನೊಂದು ಮಾತು ನೆನಪಾಯಿತು ಅದೆ ಕಣ್ರೀ ನಮ್ಮ ಜಗದ್ಗುರು, ಆರ್ಥಿಕ ತಜ್ಞ, ವಿಶ್ವಗುರು, ಬಸವಣ್ಣನವರ ಈ ವಚನ
"ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ,
ನಮ್ಮ ಕೂಡಲಸಂಗನ ಶರಣರಿಗಲ್ಲದೆ,
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ”.
“ಸಿರಿತನದ ಹೂವಿನ ಹಾಸಿಗೆಯಲಿ
ಕೂಡಿಟ್ಟ ಕಳ್ಳಹಣವು ಮುಳ್ಳಂತೆ ಚುಚ್ಚುತಿರಲು 
ನಿದ್ಧೆಯಿಲ್ಲದೆ ಚಿಂತೆಯ ಚಿತೆಯಲ್ಲಿ ಬಿದ್ದವರು
ಹೆಣದಂತೆ ಬದುಕುವರು”.
ಈ ಮೇಲಿನ ಹೇಳಿಕೆ ಅಕ್ಷರಶಃ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಸಮಯದಲ್ಲಿ ನನಗೆ ನೆನಪಿಗೆ ಬಂದಂತಹ ಮತ್ತೊಂದು ಪ್ರಮುಖ ವ್ಯಕ್ತಿಯ ಹೇಳಿಕೆಯೆಂದರೆ “ದೇಶದ ಬುದ್ಧಿ ಜೀವಿಗಳು ಮತ್ತು ಅಪರಾಧಿಗಳು ತಳಮಳಗೊಂಡಿದ್ದಾರೆಂದರೆ, ಆ ದೇಶದ ಆಡಳಿತ ನೆಡೆಸುವಾತ ಸರಿ ದಾರಿಯಲ್ಲಿ ಇದ್ದಾನೆ ಎಂದು ಅರ್ಥ”. ಈ ಹೇಳಿಕೆ ನೀಡಿದ್ದು ಬೇರೆ ಯಾರೂ ಅಲ್ಲ ಕೌಟಿಲ್ಯ ಎಂದೇ ಪ್ರಸಿದ್ಧನಾದ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ ಚಾಣಕ್ಯ.
ನಮ್ಮ ದೇಶದ ಪ್ರಸ್ತುತ ಸಂದರ್ಭದಲ್ಲಿ ಚಾಣಕ್ಯನ ಈ ಹೇಳಿಕೆ ಅಕ್ಷರಶಃ ನಿಜ.      ಅಂದರೆ ನಮ್ಮ ದೇಶದ ಪ್ರಧಾನ ಸೇವಕರು ಅಂದರೆ ಪ್ರಧಾನ ಮಂತ್ರಿಗಳು ಸರಿ 👌 ದಾರಿಯಲ್ಲಿ ಸಾಗುತ್ತಿದ್ದಾರೆ ಎಂಬುದಕ್ಕೆ ಚಾಣಕ್ಯನ ಹೇಳಿಕೆಗಿಂತ ಬೇರೆ ನಿದರ್ಶನ ಬೇಕಿಲ್ಲ.
          ಇನ್ನೊಂದು ವಿಷಯ ಏನೆಂದರೆ ನಗದು ರಹಿತ ವ್ಯವಹಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ ಅಂದರೆ ಜನರು ಚೆಕ್ ಮೂಲಕ ಅಥವಾ ಡಿ.ಡಿ. ಅಥವಾ ಕ್ರಿಕೆಟ್ ಕಾರ್ಡ್ 💳,  ಡೆಬಿಟ್‌ಕಾರ್ಡ್ 💳 ಹಾಗೂ ಇತರೆ ಅಂತರ್ಜಾಲ ಬ್ಯಾಂಕ್ ವ್ಯವಹಾರ ನಡೆಸಲು ಯಾವುದೇ ತೊಂದರೆ ಇಲ್ಲ.
          ಈ ಹಳೆಯ ನೋಟುಗಳನ್ನು ನಿಷೇಧಿಸಲಾಗಿದೆ ಎಂಬ ಸುದ್ದಿ 📰 ಕೇಳಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಬೆಚ್ಚಿ ಬಿದ್ದಿರುವುದಂತು ನಂಬಲು ಅಸಾಧ್ಯ 🙅 ಆದರೂ ಇದು ಸತ್ಯ. ಏಕೆಂದರೆ ಭಾರತದಲ್ಲಿ ನಕಲಿ ನೋಟುಗಳ ಚಲಾವಣೆಯ ದಂಧೆ ನಡೆಸುತ್ತಿದ್ದ ಪಾಕ್ ಹಾಗೂ ದೇಶದ್ರೋಹಿಗಳಿಗೆ ನಡುಕ ಉಂಟಾಗಿರುವುದಂತು ಸತ್ಯ. ಹಳೆಯ ನೋಟುಗಳನ್ನು ನಿಷೇಧಿಸುವಂತಹ ದಿಟ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರುವುದು 56 ಇಂಚಿನ ಎದೆಯುಳ್ಳ ನಮ್ಮ ನೆಚ್ಚಿನ ನರೇಂದ್ರ ಮೋದಿ ಅವರಿಂದ.
          ಇನ್ನೊಂದು ವಿಷಯ ಏನೆಂದರೆ ನರೇಂದ್ರ ಮೋದಿಯವರು ಹಳೆಯ ನೋಟುಗಳನ್ನು ನಿಷೇಧಿಸಲಾಗಿದೆ ಎಂದು ಘೋಷಣೆ 📢 ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜೋಕುಗಳ ಸುರಿಮಳೆಯೇ ಸುರಿದಿದೆ. ಅಂತಹ ಕೆಲವು ಜೋಕುಗಳ ಪಟ್ಟಿಯನ್ನು 📜 ಈ ಲೇಖನದಲ್ಲಿ ಓದುಗರಿಗೆ ನಾನು ಉಣಬಡಿಸುತ್ತಿದ್ದೆನೆ.
1. USA counting votes and INDIA counting notes...😂😂😂 ಅಂದರೆ ಅಮೆರಿಕದಲ್ಲಿ 8-11-2016 ರಂದು ವೋಟ್ ಎಣಿಕೆ ಕಾರ್ಯ ಆದರೆ ಭಾರತದಲ್ಲಿ 8-11-2016 ರ ರಾತ್ರಿ ನೋಟುಗಳನ್ನು ಎಣಿಕೆ ಮಾಡುವ ಕಾರ್ಯ ಭರದಿಂದ ಸಾಗಿತ್ತು.
2. News channels had prepared for Clinton n trump, Modi came out of syllabus 😛
3. ಬ್ಲ್ಯಾಕ್ ಮನಿ ಇದ್ದವರಿಗಿಂತ ಹೆಚ್ಚಾಗಿ ಗಂಡಂಗೆ ಗೊತ್ತಾಗದಿದ್ದಂಗೆ ದುಡ್ಡು ತೆಗ್ದಿಟ್ಕಂಡಿರೋ ಹೆಂಗ್ಸರು ಸಿಕ್ಕಿ ಬೀಳ್ತಾರೆ ಇದ್ರಿಂದ😅😂😂😂😂
4. ಮಹಿಳೆಯರಲ್ಲಿ ಗೂಂದಲ, ಜೀರಿಗೆ ಡಬ್ಬಿ, ಸಾಸಿವೆ ಡಬ್ಬಿಗಳಿಂದಲೇ 40% ಕಪ್ಪುಹಣ ಹೊರಬರುವ ಸಾಧ್ಯತೆ..😂
5. ಭ್ರಷ್ಟರಿಗೆ ನಾಳೆಯಿಂದ ಬಿಸಿನೀರು ಸ್ನಾನದ ಭಾಗ್ಯ! ತಮ್ಮ ಹಾಸಿಗೆ ಕೆಳಗೆ ಬಚ್ಚಿಟ್ಟಿರುವ ರೂ. 500 – ರೂ. 1000 ಕಪ್ಪುಹಣವನ್ನು ಒಲೆ ಕಾಯಿಸಲು ಬಳಕೆ ಮಾಡಬಹುದು! #ಮೋದಿಅಂದ್ರೆನಂಬಿಕೆ!
6. ಇದೆಲ್ಲದರ ಮಧ್ಯೆ ನನ್ನನ್ನು ಕಾಡುತ್ತಿರುವ ಪ್ರಶ್ನೆ ಬಿಗ್ ಬಾಸ್ ಮನೆಯಲ್ಲಿ ಇರೋರು ಆಚೆ ಬರೋದೆ 70 ದಿನ ಆದಮೇಲೆ ಪಾಪ ಅವರ ಹತ್ರ ಇರೋ 500, 1000 ನೋಟಿನ ಕಥೆ 😀😀😜
7. In 24 hrs 2 of the greatest democracies (ಅಮೆರಿಕ ಮತ್ತು ಭಾರತ) have gone from black to white.
8. (ಆರುಮುಗಮ್ ಸ್ಟೈಲ್'ನಲ್ಲಿ ಮೋದಿ ಜೀ)
ಯಾಕೆ ಶಾಕ್ ಆಯ್ತಾ!? ಆಗಲೇಬೇಕು ಆಗಲೇಬೇಕು ಅಂತಾ ತಾನೇ  500, 1000 ಬ್ಲಾಕ್ ಮಾಡಿದ್ದು. ಬ್ಲ್ಯಾಕ್ ಮನಿ ವೈಟ್ ಮಾಡ್ಕೊಳಿ ಅಂತ ಹೇಳಿದ್ದೇ ನಾನು. ಆದರೆ ಕೇಳಿದ್ರಾ..... ಇಲ್ಲ.... ಇನ್ಮುಂದೇ ಪ್ರತಿ ದಿನ, ಪ್ರತಿ ಕ್ಷಣ ಯಾಕಪ್ಪ ಸರ್ಕಾರಕ್ಕೆ ಮೋಸ ಮಾಡಿದೆ ಯಾಕಪ್ಪಾ ಮೋದಿ ಮಾತು ಕೇಳಲಿಲ್ಲ ಅಂತ ವಿಲವಿಲ ಒದ್ದಾಡಬೇಕು ಇದು ಮೋದಿ ಸರಕಾರ ಕಣೋ.
9. ಮಧ್ಯರಾತ್ರಿ ಕದ ತಟ್ಟಿದ ಶಬ್ದ ಕೇಳಿ ಬಾಗಿಲು ತೆಗೆದ ಅಳಿಯ. ನೋಡಿದರೆ  ಕೈಯಲ್ಲಿ ಸೂಟ್ ಕೇಸ್ ಹಿಡಿದಿರುವ ಮಾವ😳😳
ಮಾವ: ಅಳಿಯಂದಿರೇ, ವರದಕ್ಷಿಣೆ ಕಡಿಮೆ ಕೊಟ್ಟೆನೆಂದು ಮಗಳನ್ನು ಹಿಂಸಿಸಬೇಡಿ.🙏 ಇಗೋ, ಇದರಲ್ಲಿ 10 ಲಕ್ಷ 500 ರೂಗಳ ನೋಟುಗಳಿಗೆ. ತೊಗೊಳ್ಳಿ.
ಅಳಿಯ: (ಮಾವನ ಕಾಲಿಗೆ ಬಿದ್ದು) ಮಾವನವರೇ, ವರದಕ್ಷಿಣೆ ಎನ್ನುವುದು ಮಹಾಪಾಪ. ನೀವು ಮದುವೆಗೆ ಕೊಟ್ಟ ಐದು ಲಕ್ಷಗಳು ಹಾಗೆಯೇ ಇದೆ. ತೊಗೊಳ್ಳಿ. ನಮ್ಮನ್ನು.ಹರಸಿ🙏🙏 ರಾತ್ರಿ TV ನೋಡಿರದ ಮಗಳು ಈ ದೃಶ್ಯ ನೋಡಿ ಕಕ್ಕಾಬಿಕ್ಕಿ😳😳 ಮೋದಿ ಎಫೆಕ್ಟ್ 😊 😊 😊
ಇನ್ನೂ ಹಲವಾರು ಜೋಕುಗಳ ಸುರಿಮಳೆಯೇ ಸುರಿದಿದೆ.
       ಪ್ರಿಯ ಮಿತ್ರರೆ ತಮ್ಮಲ್ಲಿ ನನ್ನದೊಂದು ಸವಿನಯ ಪ್ರಾರ್ಥನೆ “ದಯವಿಟ್ಟು ಹೊಸ ನೋಟುಗಳ ಮೇಲೆ ಏನೂ ಬರೆಯಬೇಡಿ”. ಹಣ ಬರೀ ನಮ್ಮ ಆಸ್ತಿಯಲ್ಲ ಅದು ದೇಶದ ಆಸ್ತಿ ಕೂಡ. ಆದ್ದರಿಂದ ನೋಟುಗಳನ್ನು ಇನ್ನು ಮುಂದೆ ಸರಿಯಾದ ರೀತಿಯಲ್ಲಿ ಬಳಕೆ ಮಾಡೋಣ.

“ಭಾರತವನ್ನು ವಿಶ್ವ 🌏 ಗುರುವಾಗಿಸೋಣ”.

7 comments: