#ಅಜ್ಜನನ್ನು ಕಳೆದುಕೊಂಡು ಒಂದು ವರ್ಷ ನೆನಪು ಮಾತ್ರ ಲಕ್ಷ ಲಕ್ಷ...
ನಿಜಕ್ಕೂ ನಾನು ಒಂದು ವರ್ಷದಿಂದ ಏಕಾಂಗಿ ಆಗಿರುವೆ ಅಜ್ಜನನ್ನು ಕಳೆದುಕೊಂಡು
ತಂದೆ ತಾಯಿಗಿಂತ ಹೆಚ್ಚು ನನಗೆ ನನ್ನಜ್ಜನ ಹುಚ್ಚು
#ಬಾಲ್ಯದಲ್ಲಿ ತೋಳ ಮೇಲೆ ಹೊತ್ತು ನನ್ನ ಮೆರಸಿದವರೊಬ್ಬರೆ ನನ್ನ ಅಜ್ಜ
ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೂ ನಾನು ಹೆಚ್ಚು ಸಮಯ ಕಳೆದದ್ದು ನನ್ನ ಅಜ್ಜನೊಂದೀಗೆ ಅವರ ಉದ್ದನೆಯ ನಿಲುವಂಗಿ ಬಿಳಿ ಪಂಚೆ ಮಿರಿಮಿರಿ ಮಿಂಚುವ ಬೋಳು ತಲೆ ಅಯೋಡೆಕ್ಸ್ ನ ಸುವ್ವಾಸನೆ ಎಲ್ಲವೂ ಸೇರಿ ನನ್ನಜ್ಜ ನನಗೆ ಬಲು ಇಷ್ಟವಾಗಿದ್ದ
ಹಣೆಯ ಮೇಲೆ ವಿಭೂತಿ
ಬಿಳಿಯ ಅಂಗಿ,
ಬಿಳಿ ಪಂಚೆ
ಹೆಗಲ ಮೇಲೆ ಅಂಗ ವಸ್ತ್ರ
ಇದು ನನ್ನಜ್ಜನ ದಿನನಿತ್ಯದ ಸಮವಸ್ತ್ರ .
"ಹುಲಿಮನಿ ನನ್ನಜ್ಜನಿಗೆ ಪ್ರಿಯವಾದ ಆಟ"
"ಗೋದಿ ಹುಗ್ಗಿ ನನ್ನಜ್ಜನಿಗೆ ಪ್ರಿಯವಾದ ಊಟಾ"
ನನ್ನ ನೆನಪಿನ ಕೋಶದಲ್ಲಿರುವ #ಅಜ್ಜನ ನೆನಪುಗಳೇ ನನ್ನ ಬದುಕಿನುದ್ದಕ್ಕೂ ನನ್ನೊಂದಿಗಿರುವ ನಿದಿಗಳಾಗಿವೆ.
ನನ್ನ ಸಾಧನೆಗೆ ನೀವೆ ಸ್ಫೂರ್ತಿ.
ನೀವು ಬಾಲ್ಯದಲ್ಲಿ ಹೇಳಿದ ನೀತಿ ಕಥೆಗಳು ನನ್ನ ಜೀವನದ ಪಥವನ್ನೇ ಬದಲಿಸಿವೆ.
ಪ್ರತಿ ಹಂತದಲ್ಲೂ ನನ್ನಲ್ಲಿರುವ ಅಂಕು–ಡೊಂಕುಗಳನ್ನು ತಿದ್ದುವ ಗುರು ನೀವು .
ಇಂದು ನಾನು ಸರಿ ದಾರಿಯಲ್ಲಿ ಮುನ್ನಡೆಯಲು ನೀವು ನೀಡಿರುವ ಸಲಹೆ, ಸೂಚನೆ, ಮಾರ್ಗದರ್ಶನ ನಾನೆಂದೂ ಮರೆಯಲಾರೆ.
ನನ್ನ ಬದುಕಿನುದ್ದಕ್ಕೂ ಸ್ಮರಿಸುವಂತಹ ಮಾತುಗಳು ನನ್ನಲ್ಲಿ ಇನ್ನೂ ಮಾಸಿಲ್ಲ.
ಪ್ರತಿ ಕ್ಷಣ ಕ್ಷಣಕ್ಕೂ ಬಡಿದೆಬ್ಬಿಸುತ್ತಿವೆ.
ಮಾನವೀಯತೆ, ನೈತಿಕತೆಯಿಂದ ಬದುಕಲು ಕಲಿಸಿದ ನಿನ್ನ ಸಹನೆಯ ಸಲೇಹೆಗಳು ನನ್ನ ಮಸ್ಸಿನಲ್ಲಿ ಇನ್ನೂ ಹಚ್ಚ ಹಸಿರಾಗಿದೇ .
#ಅಜ್ಜನಿಗೆ ಬೆನ್ನು ನೋವು ಬಂದಾಗ ಬೆನ್ನಮೇಲೆರಿ ಬ್ಯಾಲೆನ್ಸ್ ಮಾಡಿದ್ದು ಹೇಗೆತಾನೆ ಮರೆಯಲು ಸಾಧ್ಯ
ಹವಾಯಿ ಚಪ್ಪಲಿ ಸೌಡ್ ಕೇಳಿದಾಗಲೆಲ್ಲ ಮನೆಯಿಂದ ಹೊರಗೆ ಅಜ್ಜನ್ನನ್ನು ನೋಡಲು ಓಡಿ ಬರುತ್ತಿದ್ದ ನೆನಪು ಕಣ್ಣಲ್ಲಿ ನೀರು ತರಿಸುತ್ತಿದೆ
ಇಂದಿಗೂ ಸಹ ಹವಾಯಿ ಚಪ್ಪಲಿಯ ಸೌಂಡು ಕೇಳಿದಾಗಲೆಲ್ಲ ಕಿವಿ ನಿಮಿರುುತ್ತದೆ ಮನಸ್ಸು ತಡಮಡಿಸುತ್ತೆ ನನ್ನ ಅಜ್ಜ ಬಂದನೇನೋ ಅನ್ನಿಸುತ್ತೆ .
ಎಲ್ಲವನ್ನೂ ಬರಿಯುವ ಆಸೆ ಹೇಗೆ ಬರೆಯಲಿ
ಕಣ್ಣು ತುಂಬಿ ಬರುತ್ತಿದೆ
ಕೈ ನಡುಗುತ್ತಿದೆ
#ಅಜ್ಜನೆಂದರೆ ನನಗೆ,
ಹೆದರಿಸೋ ಗುಮ್ಮ....
ಒಮ್ಮೊಮ್ಮೆ ಮುದ್ದು ತಮ್ಮ...
ಮಗದೊಮ್ಮೆ ಪ್ರೀತಿಯಲಿ "ಅಮ್ಮ"...
#ಅಜ್ಜನೆಂದರೆ ಕೆಲವೊಮ್ಮೆ,
ಮುಗಿಯದ ಲೆಕ್ಕಾಚಾರ...
ಬದುಕಿನ ಭಾಗಾಕಾರ...
ಹಸಿದಾಗ ಆಹಾರ...
ಮುಗಿಯದಷ್ಟು ಮಮಕಾರ....
#ಅಜ್ಜನೆಂದರೆ ಅವನು,
ಬದುಕಲು ಹೇಳಿಕೊಟ್ಟ ಗುರು..
ಕೆಲವೊಮ್ಮೆ ಅನ್ನಕ್ಕೆ ಬೇಳೆಸಾರು...
ಮಗದೊಮ್ಮೆ ಲಕ್ಷುರಿ ಕಾರು...
ನನ್ನಪಾಲಿನ ಕಲ್ಪತರು...
#ಅಜ್ಜನೆಂದರೆ ನನಗೆ,
ಹಣಮಾಡುವ ಯಂತ್ರ...
ಎಟಿಎಮ್'ಗೆ ಹತ್ರ...
ಕೆಲವೊಮ್ಮೆ ಫಲಿಸದ ಕುತಂತ್ರ...
ನನ್ನ ಯಶಸ್ಸಿನ ಮಂತ್ರ...
#ಅಜ್ಜನೆಂದರೆ ಕೆಲವೊಮ್ಮೆ,
ಕೀಕೊಟ್ಟ ಗೊಂಬೆ...
ಹರಡಿದ ಮರದ ಕೊಂಬೆ...
ತುಂಬಿದ ಮಹಾಸಭೆ...
ಸಾಂತ್ವನಗೊಳಿಸುವ ಅಬ್ಬೆ...
#ಅಜ್ಜನೆಂದರೆ ನನಗೆ,
ಕೆಲವೊಮ್ಮೆ ವಟವಟ...
ಪುಟ್ಟ ಮಕ್ಕಳಂತೆ ಹಟ...
ದಾರವಿಲ್ಲದ ಗಾಳಿಪಟ...
ದಡಸೇರಿಸುವುದಂತೂ ದಿಟ...
#ಅಜ್ಜನೆಂದರೆ ಯಾಕೋ,
ಕೆಲವೊಮ್ಮೆ ಸಸಾರ...
ಮಾತುಗಳು ತಾತ್ಸಾರ...
ಭಾವನೆಗಳು ತರತರ...
ಅವನಿದ್ದರಲ್ಲವೇ ಸಂಸಾರ...
ವಿಶಾಲವಾದ ಸಾಗರ...
ನಮ್ಮ ಬದುಕಿನ ಆಧಾರ...
#ಅಜ್ಜನೆಂದರೆ ಇನ್ನೂ,
ಅರ್ಥವಾಗದ ಒಗಟು...
ನಗುವಿನ ಗಂಟು...
ಪ್ರೀತಿಯ ಕಟ್ಟು...
ಸ್ನೇಹದ ಗುಟ್ಟು...
#ಅಜ್ಜನೆಂದರೆ ಅವನು,
ಬೆನ್ನುಹುಡಿಮಾಡಿದ ಮೇಸ್ಟ್ರು..
ನಮ್ಮಲ್ಲಿಯ ಮುಂಗಾರು...
ಕೆಲವೊಮ್ಮೆ ಮುದ್ದು ಕರು...
ಸ್ನೇಹದ ತವರು...
ಕಣ್ಣಂಚಿನ ಕಣ್ಣೀರು...
#ಅಜ್ಜನೆಂದರೆ ಹಾಗೇ,
ತಂಗಿಯಂತೆ ಸಿಡಿಲು...
ಅಕ್ಕನ ಒಡಲು...
ಅಮ್ಮನ ಮಡಿಲು...
ಕಾರುಣ್ಯದ ಕಡಲು...
#ಅಜ್ಜನೆಂದರೆ ಕೊನೆಗೂ,
ಕೊನೆಯಿಲ್ಲದ ವರಮಾನ...
ಬಿಟ್ಟುಕೊಡದ ಸ್ವಾಭಿಮಾನ...
ಸಹಿಸಿದನೆಲ್ಲ ಅವಮಾನ...
ನನ್ನ ಹೃದಯದಲ್ಲೊಂದು ವಿಶೇಷ ಸ್ಥಾನ...
#ಅಜ್ಜ ಆ ದೇವರು ನನಗೆ ಕೊಟ್ಟ ವರದಾನ
ಜೀವನ ಎಂಬ ನಾಟಕರಂಗದಲ್ಲಿ ಅಜ್ಜನದು ಪರಿಪೂರ್ಣವಾದಂತಹ ಪಾತ್ರ. ಮಗನಾಗಿ , ಅಣ್ಣನಾಗಿ , ಗಂಡನಾಗಿ, ಅಪ್ಪನಾಗಿ, ಚಿಕ್ಕಪ್ಪನಾಗಿ , ದೊಡ್ಡಪ್ಪನಾಗಿ , ಅಳಿಯನಾಗಿ , ಮಾವನಾಗಿ, ಅಜ್ಜನಗಿ- ಹೀಗೆ ಎಲ್ಲಾ ಪಾತ್ರಗಳಿಗೂ ನ್ಯಾಯ ಸಲ್ಲಿಸಿದ್ದಾರೆ ನನ್ನಜ್ಜ.
Great salutation for grand fathers Sir, most of the lines are similar to my side also, this reminds me my grandfather's memories. Grandfather means multiplication of hardworking.
ReplyDeleteAbsolutely Correct
Delete