ಪ್ರಿಯ ಓದುಗರಿಗೆ ಗಿರೀಶ್ ಕಳ್ಳಿಹಾಳ ಮಾಡುವ ನಮಸ್ಕಾರಗಳು
ಸ್ನೇಹಿತರೆ ಈ ಲೇಖನದಲ್ಲಿ ನಾವು ಸ್ವಚ್ಛಭಾರತ್ ಅಭಿಯಾನದಿಂದ ಆದಂತಹ ಬದಲಾವಣೆಗಳ ಕುರಿತು ತಿಳಿದುಕೊಳ್ಳೋಣ.
ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ದಾಮೋದರದಾಸ್ ಮೋದಿ ಅವರು ದಿನಾಂಕ 2 ಅಕ್ಟೋಬರ್ 2014 ರಂದು ಸ್ವಚ್ಛ ಭಾರತ ಅಭಿಯಾನ ಎನ್ನುವ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ. ಅಕ್ಟೋಬರ್ 2 2014 ರಂದು ಈ ಅಭಿಯಾನಕ್ಕೆ ಚಾಲನೆ ನೀಡಲು ಒಂದು ಪ್ರಮುಖ ಕಾರಣವಿದೆ ಅದೇನೆಂದರೆ ಅಕ್ಟೋಬರ್ 2 ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ಹಾಗಾಗಿ ಗಾಂಧೀಜಿಯವರಿಗೆ ಗೌರವವನ್ನು ಸೂಚಿಸುವ ಸಲುವಾಗಿ ಹಾಗೂ ಅವರ ದೃಷ್ಟಿಕೋನದ ಭಾರತದ ನಿರ್ಮಾಣದ ಸಲುವಾಗಿ ಈ ದಿನವನ್ನು ಪ್ರಧಾನಿಯವರು ಆಯ್ಕೆಮಾಡಿಕೊಂಡರು.
ಭಾರತಕ್ಕೆ ಸ್ವಚ್ಛ ಭಾರತ ಅಭಿಯಾನದ ಅವಶ್ಯಕತೆ ಏಕೆ?
ಸ್ವಚ್ಛ ಭಾರತ ಅಭಿಯಾನ ಅಂದರೆ ಕೊಳಚೆ ಮುಕ್ತ ಭಾರತ.
ಸ್ವಚ್ಛ ಭಾರತ ಅಭಿಯಾನದ ಉದ್ದೇಶ ದೇಶದಲ್ಲಿರುವ ಪ್ರತಿ ನಗರ, ಪ್ರತಿ ಜಿಲ್ಲೆ, ಪ್ರತಿ ತಾಲೂಕು ಹಾಗೂ ಪ್ರತಿ ಹಳ್ಳಿಗಳು ಕೂಡ ಸ್ವಚ್ಛತೆಯಿಂದ ಕೂಡಿರಬೇಕು ಎಂಬುದಾಗಿದೆ. ಅಂದರೆ ಪ್ರತಿ ನಾಗರಿಕನೂ ಕೂಡ ಆರೋಗ್ಯವಾಗಿರಬೇಕು ಮತ್ತು ಅವನು ಕ್ಷೇಮ ವಾಗಿರಬೇಕು ಎಂಬುದೆ ಈ ಯೋಜನೆಯ ಪ್ರಮುಖ ಉದ್ದೇಶ.
ನಮ್ಮ ದೇಶದಲ್ಲಿ ಸುಮಾರು 130 ಕೋಟಿ ಜನಸಂಖ್ಯೆ ಇದೆ ಇದರಲ್ಲಿ ಬಹುಪಾಲು ಜನರು ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.
ಹಳ್ಳಿಗಳಲ್ಲಿ ಮಲಮೂತ್ರ ವಿಸರ್ಜನೆ ಹೊಲಗಳಲ್ಲಿ, ರಸ್ತೆಗಳಲ್ಲಿ ಮತ್ತು ವಿವಿಧ ಜಾಗಗಳಲ್ಲಿ ಮಾಡುವುದು ಸರ್ವೇಸಾಮಾನ್ಯವಾಗಿತ್ತು ಅಂದರೆ ಬಯಲು ಶೌಚ ಸಾಮಾನ್ಯವಾಗಿತ್ತು. ಬಯಲು ಶೌಚಾಲಯದ ಅಭ್ಯಾಸವು ನಾಗರಿಕರಿಗೆ ಸಾಕಷ್ಟು ನೈರ್ಮಲ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಮತ್ತು ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮುಜುಗರ ಉಂಟು ಮಾಡುವ ಸಂಗತಿಯಾಗಿತ್ತು.
ಹಾಗಾದರೆ ಸ್ವಚ್ಛ ಭಾರತ ಅಭಿಯಾನದ ಪ್ರಯೋಜನಗಳು ಯಾವುವು?
ಜನಸಾಮಾನ್ಯರ ಆರೋಗ್ಯವನ್ನು ಸುಧಾರಿಸಲು ದಿಟ್ಟ ಹೆಜ್ಜೆ.
ತೆರೆದ(ಬಯಲು) ಮಲವಿಸರ್ಜನೆಯನ್ನು ತಡೆಗಟ್ಟುತ್ತದೆ, ಇದರಿಂದ ಮಾರಣಾಂತಿಕ ಕಾಯಿಲೆಗಳ ಅಪಾಯ ಕಡಿಮೆ ಆಗುತ್ತದೆ. ಸ್ವಚ್ಛತೆಯಿಂದ ಜನಸಾಮಾನ್ಯರ ಆರೋಗ್ಯವೂ ಸುಧಾರಿಸುತ್ತದೆ.
ನೈರ್ಮಲ್ಯ ಕಾಪಾಡಲು ಜನರಲ್ಲಿ ಜಾಗೃತಿ ಮೂಡಿಸಲು ಸರಹಾರಿ.
ಮನೆಗೊಂದು ಶೌಚಾಲಯ ನಿರ್ಮಾಣ ಎನ್ನುವ ಅಭಿಪ್ರಾಯ ಜನರಲ್ಲಿ ಬರುವಂತೆ ಮಾಡುವ ಮೂಲಕ ಜನರಿಗೆ ಜಾಗೃತಿ. ಇತ್ಯಾದಿ.
ಸ್ನೇಹಿತರೆ ನೀವೇ ಯೋಚಿಸಿ ಯಾವತ್ತಾದರೂ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದವರು ಸ್ವತಃ ತಾವೇ ಪೊರೆಯನ್ನು (ಕಸಬರಿಗೆ) ಹಿಡಿದು ಒಂದು ಪ್ರದೇಶವನ್ನು ಸ್ವಚ್ಛಗೊಳಿಸಿದ್ದು ನೋಡಿದ್ದೀರಾ? ಇಲ್ಲಾ ಅಲ್ಲವೇ?
ಆದರೆ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವತಃ ತಾವೇ ಪೊರಕೆ (ಕಸಬರಿಗೆ) ಹಿಡಿದು ಜನಸಾಮಾನ್ಯರಂತೆ ಒಂದು ಪ್ರದೇಶವನ್ನು ಸ್ವಚ್ಛಗೊಳಿಸಿದ್ದು ನಿಜಕ್ಕೂ ಶ್ಲಾಘನೀಯ. ಅಷ್ಟೇ ಅಲ್ಲದೇ ಹಲವಾರು ದಿಗ್ಗಜರಿಗೆ ಈ ಯೋಜನೆಗೆ ಕೈ ಜೋಡಿಸುವಂತೆ ಕರೆ ನೀಡಿದರು.
ಈ ಕರೆಗೆ ದೇಶದ ಸಾಮಾನ್ಯ ಜನರಿಂದ ಹಿಡಿದು ಗಣ್ಯಾತಿಗಣ್ಯರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ.
ಸ್ನೇಹಿತರೆ ಹಳ್ಳಿಗಳಲ್ಲಿ ಈ ಒಂದು ಅಭಿಯಾನದ ಫಲವಾಗಿ ಇಂದು
ಶೇ. 97% ರಷ್ಟು ಮನೆಗಳಲ್ಲಿ ಶೌಚಾಲಯಗಳು ನಿರ್ಮಾಣವಾಗಿವೆ.
ಶೇ. 100 ರಷ್ಟು ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಸ್ವಚ್ಛ ಭಾರತ ಅಭಿಯಾನದಿಂದ ಇನ್ನೂ ಆಗಬೇಕಾಗಿರುವುದು?
ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾರ್ಯ ಆಗಬೇಕಿದೆ.
ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಘಟಕ ಸ್ಥಾಪನೆ ಆಗಬೇಕು.
ಘನ ತ್ಯಾಜ್ಯ ವಸ್ತುಗಳ ಮರುಬಳಕೆ ಮಾಡಬಹುದಾದ ಕೆಲಸ ಆಗಬೇಕಿದೆ.
ಪ್ರತಿ ಗ್ರಾಮ ಪಂಚಾಯಿತಿ ವಾರ್ಡ್ ಗೆ ಒಂದು ಕಸದತೊಟ್ಟಿ ಇಡಬೇಕು.
ಸ್ನೇಹಿತರೆ ನನಗೆ ತಿಳಿದ ಮಟ್ಟಿಗೆ ಇಂದು ಇಡೀ ವಿಶ್ವಕ್ಕೆ ಕಾಡುತ್ತಿರುವ ಮಾರಕ ಖಾಯಿಲೆ ಕರೋನಾ, ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶವಾದ ನಮ್ಮ ಭಾರತಕ್ಕೆ ಅಷ್ಟಾಗಿ ಪರಿಣಾಮ ಬೀರಲು ಸಾಧ್ಯವಾಗಿಲ್ಲ ಕಾರಣ ಈ ಸ್ವಚ್ಛ ಭಾರತ ಅಭಿಯಾನದ ಫಲವಾಗಿ ಇರಬೇಕು ಅನಿಸುತ್ತಿದೆ.
ಕೊನೆಯದಾಗಿ ನನ್ನ ಮನವಿ ಏನೆಂದರೆ ದಯವಿಟ್ಟು ನಿಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಈ ಅಭಿಯಾನಕ್ಕೆ ಬೆಂಬಲ ನೀಡಿ ಹಾಗೂ ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಛತೆ ಕಾಪಾಡಲು ಪ್ರಯತ್ನಿಸಿ ಮತ್ತು ಇತರರಿಗೆ ಸ್ವಚ್ಛತೆಯಿಂದ ಆಗುವ ಉಪಯೋಗಗಳ ಬಗ್ಗೆ ತಿಳಿವಳಿಕೆ ನೀಡುವ ಮೂಲಕ ನಮ್ಮ ದೇಶವನ್ನು ಸ್ವಚ್ಛ ಹಾಗೂ ಸುಂದರವಾಗಿಸೋಣ.
ಈ ಲೇಖನವನ್ನು ಓದಿದ ನಿಮಗೆ ಇನ್ನೂ ಏನಾದರೂ ಈ ಲೇಖನದಲ್ಲಿ ಸೇರಿಸಬೇಕು ಎಂದು ಅನ್ನಿಸಿದರೆ ದಯವಿಟ್ಟು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ಆದಷ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ 🙏.
No comments:
Post a Comment