girishkallihal.blogspot.com/ is a blog containing most important articles on national and state aspects and also Kannada poems. You will find resourceful blog contents which will help you to enrich your knowledge.

Sunday, 23 August 2020

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY)

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಲೇಖನದಲ್ಲಿ ಓದುಗರಿಗೆ ನಾನು ಅಂತಹ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಒಂದು ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ.
ನಮಸ್ಕಾರ 🙏 ಸ್ನೇಹಿತರೆ ನಾನು ಗಿರೀಶ ಕಳ್ಳಿಹಾಳ.
2014 ರಲ್ಲಿ ಮೊದಲ ಬಾರಿಗೆ ಶ್ರೀ ನರೇಂದ್ರ ದಾಮೋದರದಾಸ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಮಾಡಿರುವ ಯೋಜನೆಗಳ ಬಗ್ಗೆ ಒಂದು ಕಿರು ಪರಿಚಯ.
1. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) :
ಈ ಯೋಜನೆಯನ್ನು ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಸ್ವಾತಂತ್ರ್ಯ ದಿನಾಚರಣೆಯ (15 ಅಗಸ್ಟ್ 2014) ಸಂದರ್ಭದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು.
ಸ್ನೇಹಿತರೆ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿದಂತೆ ದಿನಾಂಕ 28-ಅಗಸ್ಟ್ 2014 ರಂದು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಯೋಜನೆಯ ಪ್ರಯೋಜನಗಳು
1. ಬ್ಯಾಂಕಿನಲ್ಲಿ ವ್ಯಕ್ತಿಗೆ ಒಂದು ಮೂಲ ಉಳಿತಾಯ ಬ್ಯಾಂಕ್ ಖಾತೆಯನ್ನು ತೆರೆಯಲಾಗುವುದು.
2. ಠೇವಣಿ ಮೇಲಿ ಬಡ್ಡಿ
3. ಆಕಸ್ಮಿಕ ವಿಮಾ ರೂ. 1 ಲಕ್ಷ
4. ಶೂನ್ಯ ದರದಲ್ಲಿ ಉಳಿತಾಯ ಖಾತೆ
5. ಜೀವ ವಿಮಾ ರಕ್ಷಣೆ ರೂ. 30000
6. ಭಾರತದಾದ್ಯಂತ ಸುಲಭವಾಗಿ ಹಣ ವರ್ಗಾವಣೆ
7. ಸರ್ಕಾರಿ ಯೋಜನೆಗಳ ಫಲಾನುಭವಿಗಳು ಈ ಖಾತೆಗಳಲ್ಲಿ ನೇರ ಫಲಾನುಭವಿ ವರ್ಗಾವಣೆಯನ್ನು(ಹಣ) ಪಡೆಯುತ್ತಾರೆ
8. 6 ತಿಂಗಳವರೆಗೆ ಖಾತೆಯ ತೃಪ್ತಿದಾಯಕ ಕಾರ್ಯಾಚರಣೆಯ ನಂತರ, ಓವರ್‌ಡ್ರಾಫ್ಟ್ ಸೌಲಭ್ಯವನ್ನು ಅನುಮತಿಸಲಾಗುತ್ತದೆ
9. ಪಿಂಚಣಿ, ವಿಮಾ ಉತ್ಪನ್ನಗಳಿಗೆ ಪ್ರವೇಶ

ಈ ಯೋಜನೆಯ ಮೂಲಕ ಯಾರು ಖಾತೆ ತೆರೆಯಬಹುದು?
ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶದ ಜನರು (ಬಹು ಮುಖ್ಯವಾಗಿ ಬ್ಯಾಂಕ್ ಖಾತೆ ಇಲ್ಲದ ಎಲ್ಲರೂ).

ಅರ್ಹತೆ
10 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆ ಮತ್ತು ಬ್ಯಾಂಕ್ ಖಾತೆ ಹೊಂದಿರದವರು ಈ ಯೋಜನೆಯ ಮುಖಾಂತರ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಯನ್ನು ತೆರೆಯಬಹುದು.

ಖಾತೆ ಪಡೆಯುವ ಪ್ರಕ್ರಿಯೆ ಹೇಗೆ?
ಯಾವುದೇ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆಯಬಹುದು.

ಖಾತೆ ತೆರೆಯಲು ಬೇಕಾದ ಅವಶ್ಯಕ ದಾಖಲೆಗಳು:
ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ ಅಥವಾ ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅಥವಾ ಎನ್‌ಆರ್‌ಇಜಿಎ ಕಾರ್ಡ್ ಇತ್ಯಾದಿ.

ಈ ಲೇಖನವನ್ನು ಓದಿದ ತಮಗೆ ಧನ್ಯವಾದಗಳು 🙏.
ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
ಮುಂದಿನ ಲೇಖನದಲ್ಲಿ ಮತ್ತೊಂದು ಯೋಜನೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

1 comment:

  1. Usefull information, but please mention regarding limitations in transactions too

    ReplyDelete